1940 ಹಾಗು 50ರ ದಶಕಗಳಲ್ಲಿ ಬೆಂಗಳೂರಿನಲ್ಲಿ ಹೆಸರಾಂತ ವಕಿಲರಾದವರು ಶ್ರೀ ಬೇಲೂರು ಶ್ರೀನಿವಾಸ ಅಯ್ಯೆಂಗಾರ್. 1956ರಲ್ಲಿ ಬಹಳ ಧಾರುಣವಾಗಿ ಅವರ ಇಡೀ ಕುಟುಂಬವು ಒಂದೇ ರಾತ್ರಿಯಲ್ಲಿ ನಾಶವಾಗಿ ಹೋಯಿತು. ಅವರ ಕುಟುಂಬವು ಕೋಲೆಯಾದ ರೀತಿ ಎಷ್ಟು ನಿಗೂಢವಾಗಿತ್ತೋ, ಅವರನ್ನು ಕೊಲೆ ಮಾಡಿದ ಪಾತಕರನ್ನು ಹಿಡಿದು ಹಾಕಿದ ರೀತಿಯೂ ಅಷ್ಟೇ ನಿಗೂಢ. ಆ ಪ್ರಸಂಗ ಅಂದು ಬರೀ ಬೆಂಗಳೂರಿನಲ್ಲಲ್ಲದೆ ಇಡೀ ರಾಜ್ಯದಲ್ಲೇ ಒಂದು ಸ್ಪೋಟಕ ಸುದ್ದಿ ಮಾಡಿತ್ತು. ಅಂದಿನ ಆ ಹತ್ಯಾಕಾಂಡದ ಇಡೀ ತನಿಖೆಯನ್ನು ಇಂದು ಮೇಲೆತ್ತಿ, analyze ಮಾಡಿ, ಅವರದೇ ಆದ ಒಂದು parallel investigation ಮಾಡಿ ಬರೆದ ಪುಸ್ತಕವೇ ರವಿ ಬೆಳಗೆರೆಯವರ "ರಂಗವಿಲಾಸ್ ಬಂಗಲೆಯ ಕೊಲೆಗಳು".
ಒಂದು ವರ್ಷದ ಹಿಂದೆ ಬಸವನಗುಡಿಯ ಗಾಂಧಿ ಬಜಾರಿನ ಅವರದೇ ಪುಸ್ತಕ ಮಳಿಗೆಯಾದ "Belegere Books and Coffee" ಎದುರು, ಒಂದು ಲಘು ಸಮಾರಂಭದಲ್ಲಿ ಶ್ರೀ ಮಾಸ್ಟರ್ ಹಿರಣ್ಣಯ್ಯನವರು ಬಿಡುಗಡೆ ಮಾಡಿದ ಪುಸ್ತಕ ಇದು.
ಕೇವಲ ನೂರೇ ಪುಟಗಳ ಪುಸ್ತಕವಾಗಿದ್ದೂ, ಪುಟಕ್ಕೊಂದು ರೂಪಾಯೆಂಬಂತೆ Rs.100/- ಮೌಲ್ಯದ ಈ ಹತ್ಯಾಖಾಂಡದ ಪುಸ್ತಕ ಇಷ್ಟೊಂದು ರೋಮಾಂಚಕಾರಿಯಾಗಿರುತ್ತದೆ ಎಂದು ನಾನು ಊಹಿಸಲೇ ಇರಲಿಲ್ಲ!
ಬೆಳಗೆರೆಯವರೇ ಪುಸ್ತಕದ ಹಿಂದಿನ ಟಿಪ್ಪಣಿಯಲ್ಲಿ "ಇದು ಕಾದಂಬರಿಯಲ್ಲ" ಎಂದು ದಿಟ್ತಿಸಿದ್ದರೂ, ನನಗೆ ಇದು ನಾನು ಹಿಂದೆ ಓದಿದ ಯಾವ ಕಾದಂಬರಿಗೂ, ಕಥೆಯ ನಿರೂಪಣೆಯಲ್ಲಾಗಲೀ, ಸನ್ನಿವೇಶಗಳನ್ನು ಕಣ್ಣೆದುರು ರೂಪಿಸುವುದರಲ್ಲಾಗಲೀ ಹಾಗೂ ರೋಮಾಂಚನಗೊಳಿಸುವುದರಲ್ಲಗಲೀ ಕಡಿಮೆಯಂತೆಣಿಸಲಾಗಲಿಲ್ಲ.
ಶ್ರೀ ಬೇಲೂರು ಶ್ರೀನಿವಾಸ ಅಯ್ಯೆಂಗಾರ್ರರ ಬಂಗಲೆಯ layout ಹಾಗು ಅದರ ನಿರೂಪಣೆ, ಅವರ ಮನೆಯಲ್ಲಿದ್ದ ಅಷ್ಟೂ ಜನರ ಸುದೀರ್ಘ ವಿವರಣೆ, ಮನಯಲ್ಲಿ ಆಚಾರದಲ್ಲಿದ್ದ ಅಂದಿನ ಒಂದು orthodox ಹಾಗು ಸಿರಿವಂತ ಅಯ್ಯೆಂಗಾರ್ರರ ಮನೆತನದ ಸಂಪ್ರದಾಯಗಳು, ಐವತ್ತಾರರ ಜೂನ್ ನಲ್ಲಿ ಒಂದೇ ರಾತ್ರಿಯಲ್ಲಿ ನಡೆದ ಏಳು ಭೀಕರ ಸಾವುಗಳ ಮುಂಚೆ ಮನೆಯಲ್ಲಿ ನಡೆದ ಇತರ ಘಟನೆಗಳ ವಿವರಗಳಷ್ಟೇ ಅಲ್ಲದೆ, ಕೊಲೆಗಾರರ ವಿವರಗಳು, ಅವರ ಕ್ರಿಮಿನಲ್ ಇತಿಹಾಸ, ಶ್ರೀನಿವಾಸ ಅಯ್ಯೆಂಗಾರ್ರ ಜೊತೆಗಿನ ಅವರ ನಿಗೂಢ ಸಂಬಂಧಗಳ analysis, ಈ ಎಲ್ಲಾ ವಿಷಯಗಳನ್ನು ಚಾಚೂ ತಪ್ಪದೆ ಬೆಳಗೆರೆಯವರು ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ಅಷ್ಟಲ್ಲದೆ, ಅಕಸ್ಮಾತಾಗಿ ಅ ಪೊಲೀಸ್ ಪೇದೆ ಅದೊಂದು ರಾತ್ರಿ ಕೊಲೆಗಾರರ ಮೊದಲ ಸುಳಿವು ಹಿಡಿದ ರೀತಿ, ಅಲ್ಲಿಂದ ಆ ಕೊಲೆಯ ತನಿಖೆ ಹಿಡಿದ ಹೊಸ ದಿಕ್ಕೇ, ಈ ಕೊಲೆ ಪ್ರಕರಣದ highlight.
ಅದಲ್ಲದೇ ಬೆಳಗೆರೆಯವರು ಶ್ರೀನಿವಾಸ ಅಯ್ಯೆಂಗಾರ್ರ ಕುಟುಂಬದಲ್ಲಿ ಉಳಿದವರ ಇಂದಿನ ಪರಿಸ್ಠಿತಿಯನ್ನಲ್ಲದೇ, ಸ್ವತಃ ಆ ಕೊಲೆಗಾರರ ಕುಟುಂಬಗಳು ಇರುವ ಹಳ್ಳಿಗೆ ಕೂಡಾ ಹೋಗಿ, ಅವರ ಇಂದಿನ ಪರಿಸ್ಥಿತಿಯನ್ನು ಪರಿಶೀಲಿಸಿ ವಿವರಿಸಿದ್ದಾರೆ. ಅದು ಈ ಕಥೆಗೆ ಒಂದು ರೀತಿಯ completeness ಓದುಗರಿಗೆ ತಂದುಕೊಡುತ್ತದೆ.
ಒಟ್ಟಿನಲ್ಲಿ, ಈ ಪುಸ್ತಕವನ್ನೋದಿದ ಮೇಲೆ, ಗಾಂಧೀನಗರದ Syndicate Bank ನೋಡಿದಾಗಲೆಲ್ಲಾ ನನ್ನ ಮನಸ್ಸಿನಲ್ಲಿ ಹೊಳೆಯುವುದೆಂದರೆ "Yes! ಈ bankನ ಹಿಂದೆಯೇ ಇದ್ದದ್ದು ಆ ರಂಗವಿಲಾಸ್ ಬಂಗಲೆ. ಅಲ್ಲೇ ನಡೆದದ್ದು ಆ ಭೀಬತ್ಸ ಹತ್ಯಾಕಾಂಡ".
Super Kowshik..!!
ReplyDeleteBelegere Avara Style nalle idhe..Full odhi mugisovaregu gothe aagilla..:)